ಬಸನಗೌಡ ರುದ್ರಗೌಡ ಪಾಟೀಲರು ಮಾಜಿ ಸಂಸದರು ಹಾಗೂ ರಾಜಕೀಯ ಧುರೀಣರು. == ಜನನ == ಪಾಟೀಲರು 10ನೇ ಜನೇವರಿ 1938ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಕನಮಡಿ ಗ್ರಾಮದಲ್ಲಿ ಜನಿಸಿದರು. == ಶಿಕ್ಷಣ == ವಿಜಯಪುರದ ವಿಜಯ ಕಾಲೇಜಿನಿಂದ ಬಿ.ಎ. ಪದವಿ ಪಡೆದಿದ್ದಾರೆ. == ನಿರ್ವಹಿಸಿದ ಖಾತೆಗಳು == 1996ರಲ್ಲಿ ನಡೆದ ಲೋಕಸಭೆ 11ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದಿಂದ ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದರಾಗಿ ಮೊದಲ ಬಾರಿ ಸಂಸತ್ ಪ್ರವೇಶಿಸಿದ್ದರು. == ಉಲ್ಲೇಖಗಳು ==